ಪ್ರವಾದಿ ಮುಹಮ್ಮದರಿಗಿಂತ ಮೊದಲು ಆಗಮಿಸಿದಂತಹ ಪ್ರವಾದಿಗಳ ಜೀವನ ಚರಿತ್ರೆಯನ್ನು ಇತಿಹಾಸದ ಪುಟಗಳಲ್ಲಿ ಸಂರಕ್ಷಿಸಿಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವೆಂಬಂತೆ ಐತಿಹಾಸಿಕ ಹಾಗೂ ಶೈಕ್ಷಣಿಕ ನಿಟ್ಟಿನಲ್ಲಿ ಅವರ ಪ್ರವಾದಿತ್ವವನ್ನು ಸಾಬೀತು ಪಡಿಸುವುದು ಸುಲಭ ಸಾಧ್ಯವಲ್ಲ. ಆದರೆ ಅಂತ್ಯ ಪ್ರವಾದಿ ಮುಹಮ್ಮದರ (ಸ) ಜೀವನವು ಈ ವಿಷಯದಲ್ಲಿ ಸಂಪೂರ್ಣವಾಗಿ ಭಿನ್ನ; ಅಂತ್ಯ ಪ್ರವಾದಿಯ (ಸ) ಜೀವನ ಚರಿತ್ರೆಯು ಇತಿಹಾಸದ ಪುಟಗಳಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಸತ್ಯವನ್ನು ಜಗತ್ತಿನ ಎಲ್ಲಾ ಪ್ರಖ್ಯಾತ ಇತಿಹಾಸಕಾರರೂ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಪ್ರವಾದಿ ಮುಹಮ್ಮದರ (ಸ) ಜೀವನ ಮತ್ತು ಅವರು ತಂದ ಸಂದೇಶಗಳ ಕುರಿತು ಪ್ರಸಿದ್ಧ ವಿದ್ವಾಂಸರ ಹಾಗೂ ಸಂಶೋಧಕರ ಅಭಿಪ್ರಾಯ ಮತ್ತು ಲೇಖನಗಳನ್ನು ನೀಡಲಾಗಿದೆ.